ಲಯವಾದ್ಯೋತ್ಷವ
ಪ್ರತಿವರ್ಷದಂತೆ ಗಾನಭಾರತೀ ಈ ವರ್ಷವೂ ಲಯವಾದ್ಯೋತ್ಸವವನ್ನುಹಮ್ಮಿಕೊಳ್ಳುತ್ತಿದೆ. ಈ ಕಾರ್ಯಕ್ರಮವನ್ನು ಜೂನ್ 30, 2019, ಬೆಳಗ್ಗೆ 10ರಿಂದ ರಾತ್ರಿ 8ರವರೆಗೆ ಹಮ್ಮಿಕೊಳ್ಳಲಾಗಿದೆ. ಸಂಗೀತಗಾರರಿಗೆ, ಕೇಳುಗರಿಗೆ ಹಾಗೂ ರಸಿಕರಿಗೆ ಲಯದ ಸೂಕ್ಷ್ಮ ಗಳನ್ನು ಪರಿಚಯಿಸುವ, ಲಯದ ಅರಿವನ್ನು ಮೂಡಿಸುವ ಹಾಗೂ ಲಯದ ಕ್ಷೇತ್ರದಲ್ಲಿ ಆಗಿರುವ ಬೆಳೆವಣಿಗೆಗಳನ್ನು ತಿಳಿಸಿಕೊಡುವ ಉದ್ದೇಶ ದಿಂದ ರೂಪಿಸಲಾಗಿದೆ. ಇದರ ಲಾಭವನ್ನು ಸಂಗೀತಗಾರರು, ಸಂಗೀತ ರಸಿಕರು, ಲಯವಾದಕರು ಪಡೆದುಕೊಳ್ಳಬೇಕೆಂಬ ಆಭಿಲಾಶೆ. ಹೆಚ್ಚಿನ ಸಂಖ್ಯೆಯಲ್ಲಿ ಬಂದು ಆನಂದಿಸಿ.
ಈ ಪ್ರಯತ್ನದಲ್ಲಿ ಮೈಸೂರಿನ ಎಲ್ಲಾ ಲಯವಾದಕರೂ ಸಹಕರಿಸುತ್ತಿದ್ದಾರೆ. ಈ ಕಾರ್ಯಕ್ರಮವನ್ನು ಗಾನಕಲಾಭೂಷಣಡಾ ಟಿ ಎ ಎಸ್ ಮಣಿಯವರು ಬೆಳಿಗ್ಗೆ 10 ಗಂಟೆಗೆ ಉದ್ಘಾಟಿಸಲಿದ್ದಾರೆ. ನಂತರ ಅವರು11:30ರವರೆಗೆ ‘ನೂತನ ಸೊಲ್ಕಟ್ಟುಗಳ ರಚನೆ ಹಾಗೂ ಪ್ರಯೋಗ’ ಎಂಬ ವಿಷಯವಾಗಿ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಡಲಿದ್ದಾರೆ.


Date:
30 Jun 2019 - 10:00am to 8:30pm
Event Files:
| Attachment | Size |
|---|---|
| 699.62 KB |

